ಶಿವ ತಾಂಡವ ಸ್ತೋತ್ರ – ಕನ್ನಡ

ಶಿವ ತಾಂಡವ ಸ್ತೋತ್ರ

ಜಟಾಟವೀಗಲಜ್ಜಲಪ್ರವಾಹಪಾವಿತಸ್ಥಲೇ
ಗಲೇವಲಂಬ್ಯ ಲಂಬಿತಾಂ ಭುಜಂಗತುಂಗಮಾಲಿಕಾಮ್
ಡಮಡ್ಡಮಡ್ಡಮಡ್ಡಮನ್ನಿನಾದವಡ್ಡಮರ್ವಯಂ
ಚಕಾರ ಚಂಡತಾಂಡವಂ ತನೋತು ನಃ ಶಿವಃ ಶಿವಮ್

ಜಟಾಕಟಾಹಸಂಭ್ರಮಭ್ರಮನ್ನಿಲಿಂಪನಿರ್ಝರೀ-
-ವಿಲೋಲವೀಚಿವಲ್ಲರೀವಿರಾಜಮಾನಮೂರ್ಧನಿ
ಧಗದ್ಧಗದ್ಧಗಜ್ಜ್ವಲಲ್ಲಲಾಟಪಟ್ಟಪಾವಕೇ
ಕಿಶೋರಚಂದ್ರಶೇಖರೇ ರತಿಃ ಪ್ರತಿಕ್ಷಣಂ ಮಮ

ಧರಾಧರೇಂದ್ರನಂದಿನೀವಿಲಾಸಬಂಧುಬಂಧುರ
ಸ್ಫುರದ್ದಿಗಂತಸಂತತಿಪ್ರಮೋದಮಾನಮಾನಸೇ
ಕೃಪಾಕಟಾಕ್ಷಧೋರಣೀನಿರುದ್ಧದುರ್ಧರಾಪದಿ
ಕ್ವಚಿದ್ದಿಗಂಬರೇ ಮನೋ ವಿನೋದಮೇತು ವಸ್ತುನಿ

ಸಹಸ್ರಲೋಚನಪ್ರಭೃತ್ಯಶೇಷಲೇಖಶೇಖರ
ಪ್ರಸೂನಧೂಳಿಧೋರಣೀ ವಿಧೂಸರಾಂಘ್ರಿಪೀಠಭೂಃ
ಭುಜಂಗರಾಜಮಾಲಯಾ ನಿಬದ್ಧಜಾಟಜೂಟಕ
ಶ್ರಿಯೈ ಚಿರಾಯ ಜಾಯತಾಂ ಚಕೋರಬಂಧುಶೇಖರಃ

ಲಲಾಟಚತ್ವರಜ್ವಲದ್ಧನಂಜಯಸ್ಫುಲಿಂಗಭಾ-
-ನಿಪೀತಪಂಚಸಾಯಕಂ ನಮನ್ನಿಲಿಂಪನಾಯಕಮ್
ಸುಧಾಮಯೂಖಲೇಖಯಾ ವಿರಾಜಮಾನಶೇಖರಂ
ಮಹಾಕಪಾಲಿಸಂಪದೇಶಿರೋಜಟಾಲಮಸ್ತು ನಃ

ಕರಾಲಫಾಲಪಟ್ಟಿಕಾಧಗದ್ಧಗದ್ಧಗಜ್ಜ್ವಲ-
ದ್ಧನಂಜಯಾಧರೀಕೃತಪ್ರಚಂಡಪಂಚಸಾಯಕೇ
ಧರಾಧರೇಂದ್ರನಂದಿನೀಕುಚಾಗ್ರಚಿತ್ರಪತ್ರಕ-
-ಪ್ರಕಲ್ಪನೈಕಶಿಲ್ಪಿನಿ ತ್ರಿಲೋಚನೇ ಮತಿರ್ಮಮ

ನವೀನಮೇಘಮಂಡಲೀ ನಿರುದ್ಧದುರ್ಧರಸ್ಫುರತ್-
ಕುಹೂನಿಶೀಥಿನೀತಮಃ ಪ್ರಬಂಧಬಂಧುಕಂಧರಃ
ನಿಲಿಂಪನಿರ್ಝರೀಧರಸ್ತನೋತು ಕೃತ್ತಿಸಿಂಧುರಃ
ಕಳಾನಿಧಾನಬಂಧುರಃ ಶ್ರಿಯಂ ಜಗದ್ಧುರಂಧರಃ

ಪ್ರಫುಲ್ಲನೀಲಪಂಕಜಪ್ರಪಂಚಕಾಲಿಮಪ್ರಭಾ-
-ವಿಲಂಬಿಕಂಠಕಂದಲೀರುಚಿಪ್ರಬದ್ಧಕಂಧರಮ್
ಸ್ಮರಚ್ಛಿದಂ ಪುರಚ್ಛಿದಂ ಭವಚ್ಛಿದಂ ಮಖಚ್ಛಿದಂ
ಗಜಚ್ಛಿದಾಂಧಕಚ್ಛಿದಂ ತಮಂತಕಚ್ಛಿದಂ ಭಜೇ

ಅಗರ್ವಸರ್ವಮಂಗಳಾಕಳಾಕದಂಬಮಂಜರೀ
ರಸಪ್ರವಾಹಮಾಧುರೀ ವಿಜೃಂಭಣಾಮಧುವ್ರತಮ್
ಸ್ಮರಾಂತಕಂ ಪುರಾಂತಕಂ ಭವಾಂತಕಂ ಮಖಾಂತಕಂ
ಗಜಾಂತಕಾಂಧಕಾಂತಕಂ ತಮಂತಕಾಂತಕಂ ಭಜೇ

ಜಯತ್ವದಭ್ರವಿಭ್ರಮಭ್ರಮದ್ಭುಜಂಗಮಶ್ವಸ-
-ದ್ವಿನಿರ್ಗಮತ್ಕ್ರಮಸ್ಫುರತ್ಕರಾಲಫಾಲಹವ್ಯವಾಟ್ |
ಧಿಮಿದ್ಧಿಮಿದ್ಧಿಮಿಧ್ವನನ್ಮೃದಂಗತುಂಗಮಂಗಳ
ಧ್ವನಿಕ್ರಮಪ್ರವರ್ತಿತ ಪ್ರಚಂಡತಾಂಡವಃ ಶಿವಃ

ದೃಷದ್ವಿಚಿತ್ರತಲ್ಪಯೋರ್ಭುಜಂಗಮೌಕ್ತಿಕಸ್ರಜೋರ್-
-ಗರಿಷ್ಠರತ್ನಲೋಷ್ಠಯೋಃ ಸುಹೃದ್ವಿಪಕ್ಷಪಕ್ಷಯೋಃ
ತೃಷ್ಣಾರವಿಂದಚಕ್ಷುಷೋಃ ಪ್ರಜಾಮಹೀಮಹೇಂದ್ರಯೋಃ
ಸಮಂ ಪ್ರವರ್ತಯನ್ಮನಃ ಕದಾ ಸದಾಶಿವಂ ಭಜೇ

ಕದಾ ನಿಲಿಂಪನಿರ್ಝರೀನಿಕುಂಜಕೋಟರೇ ವಸನ್
ವಿಮುಕ್ತದುರ್ಮತಿಃ ಸದಾ ಶಿರಃಸ್ಥಮಂಜಲಿಂ ವಹನ್
ವಿಮುಕ್ತಲೋಲಲೋಚನೋ ಲಲಾಟಫಾಲಲಗ್ನಕಃ
ಶಿವೇತಿ ಮಂತ್ರಮುಚ್ಚರನ್ ಸದಾ ಸುಖೀ ಭವಾಮ್ಯಹಮ್

ಇಮಂ ಹಿ ನಿತ್ಯಮೇವಮುಕ್ತಮುತ್ತಮೋತ್ತಮಂ ಸ್ತವಂ
ಪಠನ್ಸ್ಮರನ್ಬ್ರುವನ್ನರೋ ವಿಶುದ್ಧಿಮೇತಿಸಂತತಮ್
ಹರೇ ಗುರೌ ಸುಭಕ್ತಿಮಾಶು ಯಾತಿ ನಾನ್ಯಥಾ ಗತಿಂ
ವಿಮೋಹನಂ ಹಿ ದೇಹಿನಾಂ ಸುಶಂಕರಸ್ಯ ಚಿಂತನಮ್

ಶಿವ ತಾಂಡವ ಸ್ತೋತ್ರದ ಉಗಮ

ಸದ್ಗುರು: ರಾವಣ ಒಬ್ಬ ತೀವ್ರವಾದ ಶಿವ ಭಕ್ತನಾಗಿದ್ದ ಮತ್ತು ಅದರ ಕುರಿತಾದ ಅನೇಕ ಕಥೆಗಳು ಪ್ರಚಲಿತದಲ್ಲಿವೆ. ಒಬ್ಬ ಭಕ್ತನು ಎಂದೂ ದೊಡ್ಡವನಾಗಬಾರದು, ಆದರೆ ಅವನೊಬ್ಬ ದೊಡ್ಡ ಭಕ್ತನಾಗಿದ್ದನು. ಒಂದು ಸಾರಿ ಅವನು ದಕ್ಷಿಣದ ತುತ್ತತುದಿಯಿಂದ ಕೈಲಾಸಕ್ಕೆ ನಡೆದು ಬಂದನು – ಆ ಸಮಯದಲ್ಲಿ ಅವನು ಅಷ್ಟು ದೂರದಿಂದ ನಡೆದು ಬಂದನೆಂದರೆ, ನೀವದನ್ನು ಊಹಿಸಿಕೊಳ್ಳಬಹುದು! ಬಂದವನೇ ಶಿವನ ಪ್ರಶಂಸೆಗಳನ್ನು ಹಾಡಲು ಪ್ರಾರಂಭಿಸಿದನು. ಅವನ ಬಳಿ ತಾಳವನ್ನು ಹಾಕಲು ಬಳಸುತ್ತಿದ್ದ ಒಂದು ಮೃದಂಗ ಇತ್ತು ಮತ್ತು ಅವನು ಕೈಲಾಸಕ್ಕೆ ಬರುತ್ತಿದ್ದಂತೆಯೇ, ನಿಂತಲ್ಲಿಯೇ 1008 ಶ್ಲೋಕಗಳಿರುವ ಶಿವ ತಾಂಡವ ಸ್ತೋತ್ರವನ್ನು ರಚಿಸಿದನು.

ರಾವಣನ ಸಂಗೀತಕ್ಕೆ ಮನಸೋತ ಶಿವ, ಪರಮಾನಂದದಿಂದ ಅದನ್ನು ಆಲಿಸುತ್ತಲಿದ್ದ. ಇತ್ತ ರಾವಣ, ಹಾಡುತ್ತ ಹಾಡುತ್ತ ನಿಧಾನವಾಗಿ ಕೈಲಾಸದ ದಕ್ಷಿಣ ಮುಖದಿಂದ ಅದನ್ನು ಏರಲು ಪ್ರಾರಂಭಿಸಿದ. ಇನ್ನೇನು ಅವನು ಪರ್ವತದ ತುದಿಗೆ ತಲುಪಬೇಕು ಎನ್ನುವಷ್ಟರಲ್ಲಿ, ಪಾರ್ವತಿ ಅವನು ಏರಿಬರುತ್ತಿರುವುದನ್ನು ಕಂಡಳು. ಆದರೆ ಶಿವ ಮಾತ್ರ, ಇನ್ನೂ ಅವನ ಸಂಗೀತದಲ್ಲೇ ಮುಳುಗಿಹೋಗಿದ್ದ.

ಪರ್ವತದ ತುದಿಯಲ್ಲಿ ಇಬ್ಬರಿಗೆ ಮಾತ್ರ ಸ್ಥಳವಿತ್ತು! ಆದ್ದರಿಂದ ಪಾರ್ವತಿ ಶಿವನನ್ನು ಅವನ ಸಂಗೀತ ಪರವಶತೆಯಿಂದ ಹೊರತರಲು ಪ್ರಯತ್ನಿಸಿದಳು. “ಈ ಮನುಷ್ಯ ಮೇಲಕ್ಕೆ ಹತ್ತಿ ಬರುತ್ತಿದ್ದಾನೆ” ಎಂದವಳು ಹೇಳಿದಳು. ಆದರೆ ಶಿವ ಸಂಗೀತ ಮತ್ತು ಕವಿತೆಯಲ್ಲಿ ತಲ್ಲೀನನಾಗಿ ಹೋಗಿದ್ದ. ಕೊನೆಯಲ್ಲಿ ಹೇಗೋ, ಪಾರ್ವತಿ ಅವನನ್ನು ರಾವಣನ ಸಂಗೀತದ ಮೋಡಿಯಿಂದ ಹೊರತರುವಲ್ಲಿ ಯಶಸ್ವಿಯಾದಳು, ಮತ್ತು ರಾವಣ ಪರ್ವತದ ಶಿಖರವನ್ನು ತಲುಪಿದಾಗ, ಶಿವ ತನ್ನ ಪಾದವನ್ನು ಬಳಸಿ ಅವನನ್ನು ಕೆಳಕ್ಕೆ ತಳ್ಳಿದನು. ರಾವಣ ಕೈಲಾಸದ ದಕ್ಷಿಣ ಮುಖದಿಂದ ಜಾರುತ್ತಾ ಕೆಳಕ್ಕೆ ಬಿದ್ದನು. ಅವನು ಜಾರುತ್ತಿರುವಾಗ ಅವನ ಹಿಂದೆ ಅವನ ಮೃದಂಗವೂ ಸಹ ಎಳೆದುಕೊಂಡು ಬರುತ್ತಿತ್ತು ಮತ್ತದು ಪರ್ವತದ ಮೇಲಿಂದ ಕೆಳಗಿನವರೆಗೆ ಕೊರಕಲನ್ನು ಒಂದು ಕೊರಕಲನ್ನು ಸೃಷ್ಟಿಸಿತು ಎಂಬುದಾಗಿ ಹೇಳಲಾಗುತ್ತದೆ. ನೀವು ಕೈಲಾಸದ ದಕ್ಷಿಣ ಮುಖವನ್ನು ನೋಡಿದರೆ, ಅದರ ಮಧ್ಯದಿಂದ ಬೆಣೆಯಾಕಾರದ ಗುರುತೊಂದು ಕೆಳಗಿನ ತನಕ ಹೋಗಿರುವುದನ್ನು ನೀವು ಕಾಣುತ್ತೀರಿ.

ಕೈಲಾಸದ ನಾಲ್ಕು ಮುಖಗಳ ನಡುವೆ ವ್ಯತ್ಯಾಸವನ್ನು ಗುರುತಿಸುವುದು ಅಥವಾ ಭೇದ ಮಾಡುವುದು ಸರಿಯಲ್ಲ, ಆದರೆ ದಕ್ಷಿಣದ ಮುಖ ನಮಗೆ ಪ್ರಿಯವಾದುದ್ದಾಗಿದೆ ಏಕೆಂದರೆ ಅಗಸ್ತ್ಯ ಮುನಿಗಳು ದಕ್ಷಿಣ ಮುಖದಲ್ಲಿ ವಿಲೀನಗೊಂಡರು ಎಂಬ ಕಾರಣಕ್ಕಾಗಿ. ನಾವು ದಕ್ಷಿಣದ ಮುಖವನ್ನು ಇಷ್ಟಪಡುವುದು ನಾವು ದಕ್ಷಿಣ ಭಾರತದವರು ಎಂಬ ಪೂರ್ವಾಗ್ರಹದಿಂದಾಗಿರಬಹುದು ಅಷ್ಟೆ ಮತ್ತು ಅದು ಪರ್ವತದ ಅತಿ ಸುಂದರವಾದ ಮುಖ ಎಂದು ನಾನು ಭಾವಿಸುತ್ತೇನೆ! ಅದು ಖಂಡಿತವಾಗಿಯೂ ಪರ್ವತದ ಅತ್ಯಂತ ಬಿಳಿಯ ಮುಖವಾಗಿದೆ ಏಕೆಂದರೆ ಅಲ್ಲಿ ತುಂಬ ಹಿಮ ಬೀಳುತ್ತದೆ.

ಅನೇಕ ವಿಧಗಳಲ್ಲಿ ಅದು ಪರ್ವತದ ಅತ್ಯಂತ ತೀಕ್ಷ್ಣವಾದ ಮುಖವಾಗಿದೆ ಆದರೆ ಕೆಲವೇ ಕೆಲವು ಜನ ಮಾತ್ರ ದಕ್ಷಿಣ ಮುಖದ ಕಡೆಗೆ ಹೋಗುತ್ತಾರೆ. ಅದರ ಪ್ರವೇಶ ದುರ್ಗಮವಾಗಿದ್ದು, ಪರ್ವತದ ಇತರ ಮುಖಗಳಿಗಿಂತ ಹೆಚ್ಚು ಕಷ್ಟವಾದ ಮಾರ್ಗವನ್ನು ಅದು ಒಳಗೊಂಡಿದೆ ಹಾಗೂ ಕೆಲವು ರೀತಿಯ ಜನರು ಮಾತ್ರ ಅಲ್ಲಿಗೆ ಹೋಗುತ್ತಾರೆ.

Please follow and like us:
Bookmark the permalink.

Leave a Reply