ಶ್ರೀ ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರಂ – Sri Lakshmi Narasimha Karavalambam Stotram Lyrics in Kannada

ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಸ್ತೋತ್ರ ಮತ್ತು ಶ್ಲೋಕಗಳು

ತನ್ನ ಪರಮ ಭಕ್ತನಾದ ಪ್ರಹ್ಲಾದನನ್ನು ರಕ್ಷಿಸಲು ಅವತಾರವೆತ್ತಿ ಬಂದ ಭಕ್ತವತ್ಸಲ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ವಿಷ್ಣುವಿನ ಅವತಾರ. ಜೀವನದಲ್ಲಿ ಬಡುವ ಅಡೆಗಳನ್ನು ನಿವಾರಿಸಲು ಭಕ್ತರು ಬಹಳ ಶ್ರದ್ಧಾಭಕ್ತಿಯಿಂದ ಲಕ್ಷ್ಮಿ ನರಸಿಂಹ ಸ್ವಾಮಿಯನ್ನು ಪೂಜಿಸುತ್ತಾರೆ. ಲಕ್ಷ್ಮಿ ನರಸಿಂಹ ಸ್ವಾಮಿಯನ್ನು ಪೂಜಿಸಬೇಕಾದರೆ ಬಹಳ ಕಟ್ಟುನಿಟ್ಟಿನ ಪೂಜಾಕ್ರಮವನ್ನು ಅನುಸರಿಸಬೇಕು.
ಲಕ್ಷ್ಮಿ ಸಹಿತ ನರಸಿಂಹ ಸ್ವಾಮಿಯನ್ನು ಪೂಜಿಸುವಾಗ, ಅವನನ್ನು ಪಠಿಸುವಾಗ,ಅವನ ಕೃಪೆಗೆ ಪಾತ್ರರಾಗಲು ಲಕ್ಷ್ಮಿ ನರಸಿಂಹ ಸ್ವಾಮಿ ಮಂತ್ರ, ಶ್ಲೋಕಗಳನ್ನು ಪಠಿಸುವುದು ಪದ್ಧತಿ. ಈ ಹಿನ್ನೆಲೆ ನಾವಿಂದು ಭಕ್ತರು ಲಕ್ಷ್ಮಿ ನರಸಿಂಹ ಸ್ವಾಮಿಯನ್ನು ಪಠಿಸಲು ಅನುಕೂಲವಾಗುವಂತೆ ಕರಾವಲಂಬ ಸ್ತೋತ್ರಂ, ಋಣ ವಿಮೋಚನ ನೃಸಿಂಹ ಸ್ತೋತ್ರಂ, ಶ್ರೀ ಲಕ್ಷ್ಮೀ ನೃಸಿಂಹ ಸಹಸ್ರನಾಮಾವಳಿ ಮತ್ತು ಶ್ರೀಷೋಡಶಬಾಹು ನೃಸಿಂಹಾಷ್ಟಕಮ್ ಅನ್ನು ಇಲ್ಲಿ ಸಂಗ್ರಹಿಸಿದ್ದೇವೆ. ಶ್ರೀಲಕ್ಷ್ಮಿ ನರಸಿಂಹಸ್ವಾಮಿಯನ್ನು ಪಠಿಸುತ್ತಾ ಆತನ ಕೃಪೆಗೆ ಪಾತ್ರರಾಗೋಣ:

॥ ಶ್ರೀ ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರಂ ||

ಶ್ರೀಮತ್ಪಯೋನಿಧಿನಿಕೇತನ ಚಕ್ರಪಾಣೇ
ಭೋಗೀಂದ್ರಭೋಗಮಣಿರಂಜಿತ ಪುಣ್ಯಮೂರ್ತೇ |
ಯೋಗೀಶ ಶಾಶ್ವತ ಶರಣ್ಯ ಭವಾಬ್ಧಿಪೋತ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧ ||

ಬ್ರಹ್ಮೇಂದ್ರರುದ್ರಮರುದರ್ಕಕಿರೀಟಕೋಟಿ-
ಸಂಘಟ್ಟಿತಾಂಘ್ರಿಕಮಲಾಮಲಕಾಂತಿಕಾಂತ |
ಲಕ್ಷ್ಮೀಲಸತ್ಕುಚಸರೋರುಹರಾಜಹಂಸ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೨ ||

ಸಂಸಾರದಾವದಹನಾಕುಲಭೀಕರೋರು-
ಜ್ವಾಲಾವಳೀಖಿರತಿದಗ್ಧತನೂರುಹಸ್ಯ |
ತ್ವತ್ಪಾದಪದ್ಮಸರಸೀಂ ಶರಣಾಗತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೩ ||

ಸಂಸಾರಜಾಲಪತಿತಸ್ಯ ಜಗನ್ನಿವಾಸ
ಸರ್ವೇನ್ದ್ರಿಯಾರ್ಥ ಬಡಿಶಾರ್ಥ ಝಷೋಪಮಸ್ಯ |
ಪ್ರೋತ್ಕಂಪಿತ ಪ್ರಚುರತಾಲುಕ ಮಸ್ತಕಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೪ ||

ಸಂಸಾರಕೂಪಮತಿಘೋರಮಗಾಧಮೂಲಂ
ಸಂಪ್ರಾಪ್ಯ ದುಃಖಶತಸರ್ಪಸಮಾಕುಲಸ್ಯ |
ದೀನಸ್ಯ ದೇವ ಕೃಪಯಾ ಪದಮಾಗತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೫ ||

ಸಂಸಾರಭೀಕರಕರೀಂದ್ರಕರಾಭಿಘಾತ
ನಿಷ್ಪೀಡ್ಯಮಾನವಪುಷಃ ಸಕಲಾರ್ತಿನಾಶ |
ಪ್ರಾಣಪ್ರಯಾಣಭವಭೀತಿಸಮಾಕುಲಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೬ ||

ಸಂಸಾರಸರ್ಪ ವಿಷದಗ್ಧಮಹೋಗ್ರತೀವ್ರ
ದಂಷ್ಟ್ರಾಗ್ರಕೋಟಿ ಪರಿದಷ್ಟ ವಿನಷ್ಟಮೂರ್ತೇಃ |
ನಾಗಾರಿವಾಹನ ಸುಧಾಬ್ಧಿನಿವಾಸ ಶೌರೇ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೭ ||

ಸಂಸಾರವೃಕ್ಷಮಘಬೀಜಮನಂತಕರ್ಮ-
ಶಾಖಾಯುತಂ ಕರಣಪತ್ರಮನಂಗಪುಷ್ಪಮ್ |
ಆರುಹ್ಯ ದುಃಖಫಲಿನಂ ಪತತೋ ದಯಾಲೋ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೮ ||

ಸಂಸಾರಸಾಗರ ವಿಶಾಲಕರಾಲಕಾಲ
ನಕ್ರಗ್ರಹ ಗ್ರಸಿತ ನಿಗ್ರಹ ವಿಗ್ರಹಸ್ಯ |
ವ್ಯಗ್ರಸ್ಯ ರಾಗನಿಚಯೋರ್ಮಿನಿಪೀಡಿತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೯ ||

ಸಂಸಾರಸಾಗರ ನಿಮಜ್ಜನಮುಹ್ಯಮಾನಂ
ದೀನಂ ವಿಲೋಕಯ ವಿಭೋ ಕರುಣಾನಿಧೇ ಮಾಮ್ |
ಪ್ರಹ್ಲಾದಖೇದಪರಿಹಾರ ಪರಾವತಾರ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧೦ ||

ಸಂಸಾರಘೋರಗಹನೇ ಚರತೋ ಮುರಾರೇ
ಮಾರೋಗ್ರಭೀಕರಮೃಗಪ್ರಚುರಾರ್ದಿತಸ್ಯ |
ಆರ್ತಸ್ಯ ಮತ್ಸರನಿದಾಘಸುದುಃಖಿತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧೧ ||

ಬದ್ಧ್ವಾಗಲೇ ಯಮಭಟಾ ಬಹು ತರ್ಜಯಂತಃ
ಕರ್ಷಂತಿ ಯತ್ರ ಭವಪಾಶಶತೈರ್ಯುತಂ ಮಾಮ್ |
ಏಕಾಕಿನಂ ಪರವಶಂ ಚಕಿತಂ ದಯಾಲೋ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧೨ ||

ಲಕ್ಷ್ಮೀಪತೇ ಕಮಲನಾಭ ಸುರೇಶ ವಿಷ್ಣೋ
ಯಜ್ಞೇಶ ಯಜ್ಞ ಮಧುಸೂದನ ವಿಶ್ವರೂಪ |
ಬ್ರಹ್ಮಣ್ಯ ಕೇಶವ ಜನಾರ್ದನ ವಾಸುದೇವ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧೩ ||

ಏಕೇನ ಚಕ್ರಮಪರೇಣ ಕರೇಣ ಶಂಖ
ಮನ್ಯೇನ ಸಿಂಧುತನಯಾಮವಲಂಬ್ಯ ತಿಷ್ಠನ್ |
ವಾಮೇತರೇಣ ವರದಾಭಯಪದ್ಮಚಿಹ್ನಂ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧೪ ||

ಅಂಧಸ್ಯ ಮೇ ಹೃತವಿವೇಕಮಹಾಧನಸ್ಯ
ಚೋರೈರ್ಮಹಾಬಲಿಭಿರಿಂದ್ರಿಯನಾಮಧೇಯೈಃ |
ಮೋಹಾಂಧಕಾರ ನಿವಹೇ ವಿನಿಪಾತಿತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧೫ ||

ಪ್ರಹ್ಲಾದ ನಾರದ ಪರಾಶರ ಪುಂಡರೀಕ
ವ್ಯಾಸಾದಿ ಭಾಗವತಪುಂಗವ ಹೃನ್ನಿವಾಸ |
ಭಕ್ತಾನುರಕ್ತಪರಿಪಾಲನಪಾರಿಜಾತ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧೬ ||

ಲಕ್ಷ್ಮೀನೃಸಿಂಹಚರಣಾಬ್ಜ ಮಧುವ್ರತೇನ
ಸ್ತೋತ್ರಂ ಕೃತಂ ಶುಭಕರಂ ಭುವಿ ಶಂಕರೇಣ |
ಯೇ ತತ್ಪಠಂತಿ ಮನುಜಾ ಹರಿಭಕ್ತಿಯುಕ್ತಾಃ
ತೇ ಯಾಂತಿ ತತ್ಪದಸರೋಜಮಖಂಡರೂಪಮ್ || ೧೭ ||

ಸಂಸಾರಯೋಗ ಸಕಲೇಪ್ಸಿತನಿತ್ಯಕರ್ಮ
ಸಂಪ್ರಾಪ್ಯದುಃಖ ಸಕಲೇನ್ದ್ರಿಯಮೃತ್ಯುನಾಶ |
ಸಂಕಲ್ಪ ಸಿನ್ಧುತನಯಾಕುಚ ಕುಂಕುಮಾಂಕ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧೮ ||

ಆದ್ಯನ್ತಶೂನ್ಯಮಜಮವ್ಯಯಮಪ್ರಮೇಯಂ
ಆದಿತ್ಯರುದ್ರನಿಗಮಾದಿನುತಪ್ರಭಾವಮ್ |
ಅಂಭೋಧಿಜಾಸ್ಯ ಮಧುಲೋಲುಪ ಮತ್ತಭೃಂಗ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೧೯ ||

ವಾರಾಹ ರಾಮ ನರಸಿಂಹ ರಮಾದಿಕಾನ್ತಾ
ಕ್ರೀಡಾವಿಲೋಲ ವಿಧಿಶೂಲಿ ಸುರಪ್ರವಂದ್ಯ |
ಹಂಸಾತ್ಮಕಂ ಪರಮಹಂಸ ವಿಹಾರಲೀಲಂ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೨೦ ||

ಮಾತಾ ನೃಸಿಂಹಶ್ಚ ಪಿತಾ ನೃಸಿಂಹಃ
ಭ್ರಾತಾ ನೃಸಿಂಹಶ್ಚ ಸಖಾ ನೃಸಿಂಹಃ |
ವಿದ್ಯಾ ನೃಸಿಂಹೋ ದ್ರವಿಣಂ ನೃಸಿಂಹಃ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೨೧ ||

ಪ್ರಹ್ಲಾದ ಮಾನಸ ಸರೋಜ ವಿಹಾರಭೃಂಗ
ಗಂಗಾತರಂಗ ಧವಳಾಂಗ ರಮಾಸ್ಥಿತಾಂಕ |
ಶೃಂಗಾರ ಸುಂದರ ಕಿರೀಟ ಲಸದ್ವರಾಂಗ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || ೨೨ ||

ಶ್ರೀಶಂಕರಾರ್ಯ ರಚಿತಂ ಸತತಂ ಮನುಷ್ಯಃ
ಸ್ತೋತ್ರಂ ಪಠೇದಿಹತು ಸತ್ವಗುಣಪ್ರಸನ್ನಂ |
ಸದ್ಯೋವಿಮುಕ್ತ ಕಲುಷೋ ಮುನಿವರ್ಯ ಗಣ್ಯೋ
ಲಕ್ಷ್ಮೀ ಪದಮುಪೈತಿ ಸನಿರ್ಮಲಾತ್ಮಾ || ೨೩ ||

ಯನ್ಮಾಯಯೋರ್ಜಿತಃ ವಪುಃ ಪ್ರಚುರ ಪ್ರವಾಹ
ಮಗ್ನಾರ್ಥ ಮತ್ರನಿವಹೋರು ಕರಾವಲಂಬಂ |
ಲಕ್ಷ್ಮೀನೃಸಿಂಹ ಚರಣಾಬ್ಜ ಮಧುವ್ರತೇನ
ಸ್ತೋತ್ರಂ ಕೃತಂ ಶುಭಕರಂ ಭುವಿ ಶಂಕರೇಣ || ೨೪ ||

ಶ್ರೀಮನ್ನೃಸಿಂಹ ವಿಭವೇ ಗರುಡಧ್ವಜಾಯ
ತಾಪತ್ರಯೋಪಶಮನಾಯ ಭವೌಷಧಾಯ |
ತೃಷ್ಣಾದಿ ವೃಶ್ಚಿಕ ಜಲಾಗ್ನಿ ಭುಜಂಗ ರೋಗ
ಕ್ಲೇಶಾಪಹಾಯ ಹರಯೇ ಗುರವೇ ನಮಸ್ತೇ || ೨೫ ||

ಇತಿ ಶ್ರೀಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರಮ್ |

Please follow and like us:
Bookmark the permalink.

Leave a Reply